Jio Prepaid Plan: ಕೇವಲ 39 ರೂ. ಪ್ಲಾನ್​​ನಲ್ಲಿದೆ ಇಂಟರ್ನೆಟ್ ಸೌಲಭ್ಯ, ಅನಿಯಮಿತ ಉಚಿತ ಕರೆ!

 Jio Prepaid Plan: ಕೇವಲ 39 ರೂ. ಪ್ಲಾನ್​​ನಲ್ಲಿದೆ ಇಂಟರ್ನೆಟ್ ಸೌಲಭ್ಯ, ಅನಿಯಮಿತ ಉಚಿತ ಕರೆ!

jio Phone: ಈ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿದಿನ 0.5 ಹೈ-ಸ್ಪೀಡ್ ಡೇಟಾ ಸಿಗಲಿದೆ. ಒಟ್ಟಾರೆ 7ಜಿಬಿಯನ್ನು ನೀಡುತ್ತಿದೆ.

ಕೊರೊನಾ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನರು ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವರಂತೂ ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ.  ಹೀಗಿರುವಾಗ ಆದಾಯ ಮತ್ತು ಆಹಾರ ಸಂಗ್ರಹಿಸಲು ಜನರು ದಾರಿ ಹುಡುಕುತ್ತಿದ್ದಾರೆ.

ಜನರು ಸಂಕಷ್ಟದಲ್ಲಿರುವದನ್ನು ಅರಿತು ಟೆಲಿಕಾಂ ಕಂಪನಿಗಳು ಕೂಡ ಕಡಿಮೆ ಬೆಲೆಯ ಪ್ಲಾನ್​ಗಳನ್ನು ಪರಿಚಯಿಸುತ್ತಿದೆ. ಮಾತ್ರವಲ್ಲದೆ ಹೆಚ್ಚಿನ ಬೆನಿಫಿಟ್ಸ್ ಒದಗಿಸುತ್ತಿದೆ. ಅದರಂತೆ ನಂಬರ್ 1 ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ತನ್ನ ಜಿಯೋಫೋನ್​ ಬಳಕೆದಾರರಿಗೆ ಕಡಿಮೆ ಬೆಲೆಯ ಪ್ಲಾನ್​ಗಳನ್ನು ನೀಡುತ್ತಿದೆ.

ಜಿಯೋ 39 ರೂ ಪ್ರಿಪೇಯ್ಡ್​ ಪ್ಲಾನ್: ಈ ಪ್ಲಾನ್ ಮೂಲಕ ಗ್ರಾಹಕರು 100ಎಂಬಿ ಡೇಟಾ ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ನೀಡುತ್ತಿದೆ. 14 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದೆ.
39 ರೂ ಪ್ಲಾನ್ ಮೂಲಕ ಒಟ್ಟು 1400 ಎಂಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. ಆದರೆ ಪ್ರತಿದಿನ 100 ಎಂಬಿಯಂತೆ ಸಿಗಲಿದ್ದು, ಡೇಟಾ ಕಾಲಿಯಾಗುತ್ತಿದ್ದಂತೆ 64ಕೆಬಿಪಿಎಸ್​ಗೆ  ಸ್ಪೀಡ್ ಇಳಿಯಲಿದೆ.




69 ರೂ ಪ್ಲಾನ್: ಈ ಪ್ಲಾನ್ ಅಳವಡಿಸಿಕೊಂಡ ಗ್ರಾಹಕರಿಗೆ ಪ್ರತಿದಿನ 0.5 ಹೈ ಸ್ಪೀಡ್ ಡೇಟಾ ಸಿಗಲಿದೆ. ಒಟ್ಟಾರೆ 7ಜಿಬಿಯನ್ನು ನೀಡುತ್ತಿದೆ.

69 ರೂ ಪ್ಲಾನ್ ಅನಿಯಮಿತ ಕರೆ ಸೌಲಭ್ಯ ಸೇರಿದಂತೆ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಡೇಟಾ ಖಾಲಿಯಾಗುತ್ತಿದ್ದಂತೆ ಅದರ ಸ್ಪೀಡ್ 64ಕೆಬಿಪಿಎಸ್​ಗೆ ಇಳಿಯಲಿದೆ
ಜಿಯೋ ಪರಿಚಯಿಸಿದೆ ಹೊಸ ಪ್ಲಾನ್​ಗಳು ಇದಾಗಿದೆ. ಗ್ರಾಹಕರಿಗೆ ತಿಂಗಳಿಗೆ 300 ನಿಮಿಷಗಳ ಹೊರ ಹೋಗುವ ಕರೆ ಸೌಲಭ್ಯ ನೀಡುತ್ತಿದೆ
Previous Post Next Post